ಅದಾನಿ ಫೌಂಡೇಶನ್: ಸಿಎಸ್‍ಆರ್ ಯೋಜನೆಯಡಿ ಪಲಿಮಾರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರೂ.4.50 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ

ಪಡುಬಿದ್ರಿ: ಅದಾನಿ-ಯುಪಿಸಿಎಲ್ ತನ್ನ ಸಾಮಾಜಿಕ ಹೊಣೆಗಾರಿಕೆ(ಸಿಎಸ್‍ಆರ್) ಕೆಲಸಗಳನ್ನು ನಿರ್ವಹಿಸುವ ಅದಾನಿ ಫೌಂಡೇಶನ್ ವತಿಯಿಂದ ಪಲಿಮಾರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರೂ.4.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಶೌಚಾಲಯವನ್ನು ಕಂಪನಿಯ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹಾಗೂ ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ ಫುರ್ಟಾಡೋ ಜಂಟಿಯಾಗಿ ಉದ್ಘಾಟಿಸಿದರು.

ಈ ಸಂದರ್ಭ ಕಿಶೋರ್ ಆಳ್ವ ಮಾತನಾಡಿ,ಅದಾನಿ ಫೌಂಡೇಶನ್ ತನ್ನ ಸಿ.ಎಸ್.ಆರ್.ಯೋಜನೆಯಡಿ ಸ್ವಚ್ಛತೆಯನ್ನು ಆಗ್ರಹಿಸುವ “ಸ್ವಚ್ಛಾಗ್ರಹ” ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಿದ್ದು,ಆ ಯೋಜನೆಯ ಅಂಗವಾಗಿ ಮತ್ತು ಹಸಿರು ಪೆÇೀಷಣ ಕಾರ್ಯಕ್ರಮ(ಗ್ರೀನ್ ನರ್ಚರಿಂಗ್ ಪೆÇ್ರೀಗ್ರಾಂ) ಅಡಿಯಲ್ಲಿ ಪಲಿಮಾರು ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಸುಸ್ಸಜಿತ ಶೌಚಾಲಯವನ್ನು ನಿರ್ಮಾಣ ಮಾಡಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಹಸಿರು ಪೆÇೀಷಣಾ ಕಾರ್ಯಕ್ರಮದಡಿ ಅದಾನಿ ಫೌಂಡೇಷನ್ 3 ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಿದೆ.ಪಲಿಮಾರು ಶಾಲಾ ಮಮವಿಯ ಮೇರೆಗೆ ಇಲ್ಲಿ ತುರ್ತಾಗಿ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ಆಳ್ವ ತಿಳಿಸಿದರು.
ಅದಾನಿ ಸಮೂಹವು ಯುಪಿಸಿಲ್ ಸ್ಥಾವರದ ಆಸುಪಾಸಿನ 7 ಗ್ರಾಮ ಪಂಚಾಯಿತಿಗಳಲ್ಲಿ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಪಡಿಸಲು ಅನುದಾನವನ್ನು ನಿಯೋಗಿಸಿದ್ದು,ಅದರ ಜೊತೆಗೆ ಶಿಕ್ಷಣ,ಆರೋಗ್ಯ,ಪರಿಸರ,ಗ್ರಾಮೀಣ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರದಲ್ಲೂ ಹಲವಾರು ಸಾಮಾಜಿಕ ಬೆಳವಣಿಗೆ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು ಗ್ರಾಮಸ್ಥರಿಗೆ ಸಿಎಸ್‍ಆರ್ ಯೋಜನೆಯ ಪ್ರಯೋಜನಗಳನ್ನು ತಲುಪಿಸುತ್ತಿದೆ ಎಂದು ಆಳ್ವ ತಿಳಿಸಿದರು.
ಇದೇ ಸಂದರ್ಭದಲ್ಲಿ ಅದಾನಿ ಫೌಂಡೇಷನ್ “ಸ್ವಚ್ಛಾಗ್ರಹ” ಕಾರ್ಯಕ್ರಮಕ್ಕೆ ಪೆÇ್ರೀತ್ಸಾಹಿಸಲು ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿದ್ದು,ಕಿಶೊರ್ ಆಳ್ವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಮಾತನಾಡಿ,ಅದಾನಿ ಸಮೂಹದ ಪರಿಸರ ಬಗ್ಗೆ ಇರುವ ಕಾಳಜಿಗೆ ಅಭಿನಂದಿಸಿ ಸಂಸ್ಥೆಯ ಸಿಎಸ್‍ಆರ್ ಯೋಜನೆಗಳನ್ನು ಪಲಿಮಾರು ಗ್ರಾಮದಲ್ಲಿ ನಿರಂತರ ಆಯೋಜಿಸುವಂತೆ ವಿನಂತಿಸಿದರು.

ಸಮಾರಂಭದಲ್ಲಿ ಎ.ಪಿ.ಎಂ.ಸಿ.ಸದಸ್ಯ ನವೀನ್‍ಚಂದ್ರ ಸುವರ್ಣ,ಪಲಿಮಾರು ಗ್ರಾಪಂ ಉಪಾಧ್ಯಕ್ಷೆ ಸುಮಂಗಲಾ ದೇವಾಡಿಗ,ಸದಸ್ಯರಾದ ಗಾಯತ್ರಿ ಪ್ರಭು, ಸತೀಶ್,ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗ್ರೇಟಾ ಮೋರೀಸ್,ಬಿಜೆಪಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸಾದ್ ಪಲಿಮಾರು,ಎಸ್.ಡಿ.ಎಂ.ಸಿ.ಸದಸ್ಯ ಸುರೇಶ ಆಚಾರ್ಯ,ಸ್ವಚ್ಛಾಗ್ರಹ ಪ್ರೇರಕ ಕಲ್ಲಪ್ಪ,ಯುಪಿಸಿಎಲ್ ಸಂಸ್ಥೆಯ ಏಜಿಎಂ ಗಿರೀಶ್ ನಾವಡ,ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ,ಅದಾನಿ ಫೌಂಡೇಶನ್ ಸ್ವಚ್ಚಾಗ್ರಹ ಯೋಜನಾಧಿಕಾರಿ ವಿನೀತ್ ಅಂಚನ್,ಸುಕೇಶ್ ಸುವರ್ಣ,ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ವಂದಿಸಿದರು.