ಹೆಜಮಾಡಿ ನೂತನ ಬಂದರು ಯೋಜನಾ ಸ್ಥಳಕ್ಕೆ ಇಲಾಖಾಧಿಕಾರಿಗಳ ಭೇಟಿ

ಪಡುಬಿದ್ರಿ: ಬಹು ನಿರೀಕ್ಷಿತ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ವಿವಿಧ ಇಲಾಖಾಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಯೋಜನೆಯ ಪ್ರಥಮ ಹಂತವಾಗಿ ಕೇಂದ್ರ ಸರಕಾರವು 13.80 ಕೋಟಿ ರೂ. ಬಿಡುಗಡೆ ಮಾಡಿದ್ದು, ಅಷ್ಟೇ ಅನುದಾನ ರಾಜ್ಯ ಸರಕಾರ ಬಿಡುಗಡೆ ಮಾಡಬೇಕಿದೆ. ಕೇಂದ್ರ ಸರಕಾರದ ಅನುದಾನದ ಮೂಲಕ ಪ್ರಥಮ ಹಂತದ ಕಾಮಗಾರಿ ನಡೆಸುವ ನಿಟ್ಟಿನಲ್ಲಿ ಕುಂದಾಪುರ ಸಹಾಯಕ ಕಮೀಷನರ್ ಮಧುಕೇಶ್ವರ್, ಬಂದರು ಮತ್ತು ಮೀನುಗಾರಿಕಾ ಅಧಿಕಾರಿ ಜಯರಾಜ್, ಉಡುಪಿ ಕೃಷಿ ಅಧಿಕಾರಿ ಪ್ರಕಾಶ್‍ರಾಜ್, ತೋಟಗಾರಿಕಾ ಅಧಿಕಾರಿ ಹೆಗಡೆ, ರೆವಿನ್ಯೂ ಶಿರಸ್ತೇದಾರ್, ಮೀನುಗಾರಿಕಾ ಉಪನಿರ್ದೇಶಕ ಪಾಶ್ರ್ವನಾಥ್, ಸಹಾಯಕ ನಿರ್ದೇಶಕರಾದ ಶಿವಕುಮಾರ್ ಮತ್ತು ಕಿರಣ್, ಸರ್ವೇಯರ್ ಶಿವಣ್ಣರವರು ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಮೀನುಗಾರರ ಮುಖಂಡರಾದ ವಿಜಯ ಎಸ್.ಬಂಗೇರ ಮತ್ತು ವಿನೋದ್ ಕೋಟ್ಯಾನ್ ಇಲಾಖಾಧಿಕಾರಿಗಳಲ್ಲಿ ಸ್ಥಳೀಯ ಮೀನುಗಾರರ ಬಹುದಿನದ ಬೇಡಿಕೆಯಾದ ಹೆಜಮಾಡಿ ಬಂದರು ಯೋಜನೆಯನ್ನು ಆದಷ್ಟು ಶೀಘ್ರ ಅನುಷ್ಠಾನಗೊಳಿಸುವಂತೆ ವಿನಂತಿಸಿದರು.
ಬಂದರು ನಿರ್ಮಾಣ ಸ್ಥಳ ಪರಿಶೀಲನೆ ನಡೆಸಿದ್ದು, ಈ ಕೂಡಲೇ ಜಮೀನು ವರ್ಗಾವಣೆ ಪ್ರಕ್ರಿಯೆ ನಡೆಸಿಕೊಡುವುದಾಗಿ ಸಹಾಯಕ ಕಮೀಷನರ್ ಮಧುಕೇಶ್ವರ್ ಭರವಸೆ ನೀಡಿದರು.

Leave a Reply

Your email address will not be published. Required fields are marked *