ಹೆಜಮಾಡಿ ದೇಗುಲ ಜೀರ್ಣೋದ್ಧಾರಪೂರ್ವಕ ಶಿಲಾ ಮೂಹೂರ್ತ,ದಾರು ಮುಹೂರ್ತ

ಪಡುಬಿದ್ರಿ: ಸುಮಾರು 10 ಕೋಟಿ ರೂ.ವೆಚ್ಚದಲ್ಲಿ ಪುನರ್‍ನಿರ್ಮಾಣಗೊಳ್ಳಲಿರುವ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರಪೂರ್ವಕ ಶಿಲಾ ಮುಹೂರ್ತ ಮತ್ತು ದಾರು ಮುಹೂರ್ತ ಶುಕ್ರವಾರ ಧಾರ್ಮಿಕ ವಿಧಿಗಳೊಂದಿಗೆ ಆರಂಭಗೊಂಡಿತು.

ದೇವಳದ ತಂತ್ರಿಗಳಾದ ವೇದಮೂರ್ತಿ ರಾಧಾಕೃಷ್ಣ ತಂತ್ರಿ ಎಡಪದವು ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ಬಳಿಕ ಶಿಲ್ಪಿ ಕುಪ್ಪುಸ್ವಾಮಿ ಕಾರ್ಕಳ, ದಾರು ಶಿಲ್ಪಿ ಕಲ್ಲಮುಂಡ್ಕೂರು ನಾರಾಯಣ ಅಚಾರ್ಯ, ಇಂಜಿನಿಯರ್‍ಗಳಾದ ವಿಷ್ಣುಮೂರ್ತಿ ಭಟ್ ಎಲ್ಲೂರು ಮತ್ತು ಚಂದ್ರಹಾಸ ಕಿನ್ನಿಗೋಳಿ, ವಾಸ್ತುಶಿಲ್ಪಿ ಸುಬ್ರಹ್ಮಣ್ಯ ಅವಧಾನಿಯವರಿಗೆ ಮುಂಗಡ ಸಹಿತ ಪ್ರಸಾದ ನೀಡುವ ಮೂಲಕ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ದೇವಳದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಯಂತ್ ಶೆಟ್ಟಿ ಪುಣೆ, ಕಾರ್ಯಾಧ್ಯಕ್ಷ ಕೊಂಬೆಟ್ಟು ರಘುಪತಿ ಭಟ್, ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಸುಧಾಕರ ಕರ್ಕೇರ, ಲೋಕೇಶ್ ಅಮೀನ್, ಹರೀಶ್ ದೇವಾಡಿಗ, ಪಡುಮನೆ ಅರುಣ್ ಶೆಟ್ಟಿ ಗುತ್ತಿನಾರ್ ಮತ್ತು ರಾಜೇಶ್ ಆಚಾರ್ಯ, ಕಾರ್ಯದರ್ಶಿ ದಿವಾಕರ್ ಹೆಜ್ಮಾಡಿ, ಜತೆ ಕಾರ್ಯದರ್ಶಿ ಶ್ರೀನಿವಾಸ ಕೋಟ್ಯಾನ್, ಕೋಶಾಧಿಕಾರಿ ರಮೇಶ್ ಭಟ್, ಜತೆ ಕೋಶಾಧಿಕಾರಿ ಪ್ರಬೋದ್ ಹೆಜ್ಮಾಡಿ, ದೇವಳದ ಟ್ರಸ್ಟಿಗಳಾದ ಶೇಷಗಿರಿ ರಾವ್, ಸಂಜೀವ ಟಿ, ಪಾಂಡುರಂಗ ಕರ್ಕೇರ, ಸುರೇಶ್ ದೇವಾಡಿಗ, ರವೀಂದ್ರ ಎನ್.ಕೋಟ್ಯಾನ್, ಜಯಂತ್ ಪುತ್ರನ್, ಗಣೇಶ್ ಆಚಾರ್ಯ, ಜಯಂತಿ ಶೇಖರ್ ಆಚಾರ್ಯ, ಹರೀಶ್ ಶೆಣೈ ಮತ್ತು ಇಂದ್ರೇಶ್ ಆರ್.ಸಾಲ್ಯಾನ್, ಅರ್ಚಕರಾದ ರಂಗನ ಭಟ್, ರಾಮಚಂದ್ರ ಭಟ್, ಶ್ರೀನಿವಾಸ ಆಚಾರ್ಯ, ಪದ್ಮನಾಭ ಭಟ್, ಪದ್ಮನಾಭ ಆಚಾರ್ಯ, ಲಕ್ಷ್ಮೀಶ ಭಟ್, ಗ್ರಾಮದ ಪ್ರಮುಖರಾದ ವಿಶಾಲಾಕ್ಷಿ ಪುತ್ರನ್, ನಾರಾಯಣ ಮೆಂಡನ್, ವಾಮನ ಕೋಟ್ಯಾನ್ ನಡಿಕುದ್ರು, ಲೋಕನಾಥ ಗುರಿಕಾರ, ಸದಾಶಿವ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.