ಹೆಜಮಾಡಿ: ಅಲ್-ಅಝಹರ್ ಶಾಲೆಯಲ್ಲಿ ವನಮಹೋತ್ಸವ

ಪಡುಬಿದ್ರಿ: ವಿಶ್ವ ಪರಿಸರದ ದಿನದ ಅಂಗವಾಗಿ ಹೆಜಮಾಡಿಯ ಅಲ್-ಅಝಹರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಹೆಜಮಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ವೈ. ಶೆಟ್ಟಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಶಾಲಾ ವಠಾರದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು. ಪರಿಸರ ಪ್ರೇಮವನ್ನು ಬಿಂಬಿಸುವ ಸಾಂಸ್ಕøತಿಕ ವಿದ್ಯಾರ್ಥಿಗಳು ನೀಡಿದರು.

ಹೆಜಮಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧಾಕರ ಕರ್ಕೇರ, ಶಾಲಾ ಸಂಚಾಲಕ ಕೆ.ಎಸ್. ಶೇಖಬ್ಬ, ಕಾರ್ಯದರ್ಶಿ ಎಂ.ಐ. ಮುಹಮ್ಮದ್, ಉಪ ಪ್ರಾಂಶುಪಾಲೆ ಶಾಹಿನ್, ಎಚ್.ಎಸ್. ಅಬ್ದುಲ್ಲಾ, ಹಂಝ ಅಹಮದ್ ಉಪಸ್ಥಿತರಿದ್ದ