ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತೃಶಾ

ಪಡುಬಿದ್ರಿ: ಸಾರ್ವಜನಿಕ ಶಿಕ್ಷಣ ಇಲಾಖೆ,ತುಮಕೂರು ಜಿಲ್ಲಾಡಳಿತ,ಜಿಪಂ ಆಶ್ರಯದಲ್ಲಿ ಇತ್ತೀಚೆಗೆ ತುಮಕೂರು ಜಿಲ್ಲಾ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 200 ಮೀಟರ್ ಓಟದಲ್ಲಿ ಕಂಚು,400* 100 ಮೀಟರ್ ರಿಲೇ ಓಟದಲ್ಲಿ ರಾಜ್ಯ ದಾಖಲೆಯೊಂದಿಗೆ ಸ್ವರ್ಣ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಉಡುಪಿ ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ತೃಶಾ.ಇವರು ಪಡುಬಿದ್ರಿ ಪೋಲೀಸ್ ಠಾಣಾ ಹೆಡ್‍ಕಾನ್ಸ್‍ಟೇಬಲ್ ಅಮೃತೇಶ್ ಮತ್ತು ರೇಷ್ಮಾ ದಂಪತಿಯ ಪುತ್ರಿ.ಹಾಗೂ ಉಡುಪಿಯ ಜಾಹಿರ್ ಅಬ್ಬಾಸ್‍ರವರಿಂದ ತರಬೇತಿ ಪಡೆದಿರುತ್ತಾಳೆ.