ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ಗುಲಾಬಿ ಹೂವು

ಪಡುಬಿದ್ರಿ: ರಸ್ತೆ ನಿಯಮ ಉಲ್ಲಂಘಿಸಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಗುರುತಿಸಿ ವಾಹನ ಸಮಾರರಿಗೆ ಗುಲಾಬಿ ಹೂವನ್ನು ನೀಡುವ ಜತೆಗೆ ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸದೆ ಪ್ರಯಾಣಿಸುವಂತೆ ಹಿತವಚನ ಕಾರ್ಯಕ್ರಮ ಸೋಮವಾರ ಪಡುಬಿದ್ರಿ ಪೇಟೆಯಲ್ಲಿ ನಡೆಯಿತು.

ಪಡುಬಿದಿ ಪೋಲೀಸರು,ಕರವೇ(ಪ್ರವೀಣ್ ಶೆಟ್ಟಿ ಬಣ) ಮತ್ತು ಸಾರ್ವಜನಿಕರು ಬೆಳಿಗ್ಗೆ ಪಡುಬಿದ್ರಿ-ಕಾರ್ಕಳ ಕೂಡು ರಸ್ತೆಯಲ್ಲಿ ನಿಂತು ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ,ಸೀಟ್ ಬೆಲ್ಟ್ ಧರಿಸದ ಕಾರು ಹಾಗೂ ಇತರ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳನ್ನು ಗುರುತಿಸಿ ಗುಲಾಬಿ ಹೂವನ್ನು ನೀಡಿದ್ದಲ್ಲದೆ ಇನ್ನು ಮುಂದೆ ಸಂಚಾರ ನಿಯಮ ಯಲ್ಲಂಘಿಸದಂತೆ ಮನವಿ ಮಾಡಿದರು.ನಿರಂತರ ಅಪಘಾತಗಳು ಸಂಭವಿಸುವ ಬಗ್ಗೆ ಮಾಹಿತಿ ನೀಡಿ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಹಿತವಚನ ನೀಡಿದರು.

ಈ ಸಂದರ್ಭ ಪಡುಬಿದ್ರಿ ಠಾಣಾ ಎಎಸ್‍ಐ ಜಯ ಕೆ.,ಎಚ್‍ಸಿಗಳಾದ ರುದ್ರೇಶ್ ಮತ್ತು ಯೋಗೀಶ್,ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್,ಕಾಪು ತಾಲೂಕು ಉಪಾಧ್ಯಕ್ಷ ಆಸಿಫ್ ಆಪತ್ಭಾಂಧವ,ಪಡುಬಿದ್ರಿ ಗ್ರಾಪಂ ಸದಸ್ಯ ಹಸನ್ ಬಾವ ಮತ್ತಿತರರು ಉಪಸ್ಥಿತರಿದ್ದರು.