ಮೂಲ್ಕಿ ಹೋಬಳಿಯಲ್ಲಿ ಸಂಪರ್ಕದಿಂದ ಮತ್ತೆ ಎರಡು ಕೊರೊನಾ ಪಾಸಿಟಿವ್

ಮೂಲ್ಕಿ: ಹೋಬಳಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ಇಬ್ಬರಿಗೆ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ದಿನಗಳ ಹಿಂದೆ ಮಂಗಳೂರಿನಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಮಹಿಳೆಗೆ ಸೋಂಕು ಬಂದಿದ್ದು ಅವರ ಮಗಳು 8 ವರ್ಷದ ಬಾಲಕಿಗೆ ಗಂಟು ದ್ರವಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಕೊಯಿಕುಡೆ ಬೊಳ್ಳೂರು ನಿವಾಸಿ 55 ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ ಸಂಪರ್ಕದಿಂದ ಗಂಟಲು ದ್ರವಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕತಾರ್‍ನಿಂದ ಬಂದ ಹೆಜಮಾಡಿಕೋಡಿಯ ವ್ಯಕ್ತಿಗೆ ಸೋಂಕು
ಪಡುಬಿದ್ರಿ: ಕತಾರ್‍ನಿಂದ ಬಂದು ಬೆಂಗಳೂರಿನಲ್ಲಿ ಕ್ವಾರಂಟೈನ್‍ನಲ್ಲಿದ್ದ ಹೆಜಮಾಡಿ ಕೋಡಿಯ 53 ವರ್ಷದ ವ್ಯಕ್ತಿಗೆ ಗಂಟಲು ಸ್ರಾವ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ.
ಅವರು ಕತಾರ್‍ನಿಂದ ಬೆಂಗಳೂರಿಗೆ ಬಂದು ಅಲ್ಲೇ ಕ್ವಾರಂಟೈನ್‍ನಲ್ಲಿದ್ದ ಸಂದರ್ಭ ಸೋಂಕು ದೃಢಪಟ್ಟ ಕಾರಣ ಅವರಿಗೆ ಬೆಂಗಳೂರು ಕೋವಿಡ್ ಆಸ್ಪತೆಯಲ್ಲೇ ಚಿಕಿತ್ಸೆ ನಡೆಸಲಾಗುತ್ತಿದೆ.