ಮೂಲ್ಕಿ ಲಯನ್ಸ್ ಪದಗ್ರಹಣ

ಮೂಲ್ಕಿ: ಲಯನ್ಸ್ ಕ್ಲಬ್‍ನ 2020-2021 ಸಾಲಿನ ನೂತನ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್ ಮತ್ತವರ ತಂಡದ ನೂತನ ಪದಗ್ರಹಣ ಸಮಾರಂಭವು ಮಂಗಳವಾರ ಮೂಲ್ಕಿಯ ಎಸ್‍ಎನ್‍ಜಿ ಕಾಲೇಜು ಸಂಕೀರ್ಣದ ತೆರೆದ ಸಭಾಂಗಣದಲ್ಲಿ ಸಾಮಾಜಿಕ ಅಂತರದೊಂದಿಗೆ ನಡೆಯಿತು.

ಕಸಾಪ ಪೂರ್ವಾಧ್ಯಕ್ಷ ಹಾಗೂ ಲಯನ್ಸ್ ಮಾಜಿ ಗವರ್ನರ್ ಹರಿಕೃಷ್ಣ ಪುನರೂರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಈ ಸಂದರ್ಭ ಮಾತನಾಡಿದ ಅವರು ಪ್ರತಿಫಲಾಪೇಕ್ಷೆಯಿಲ್ಲದ ಸೇವೆಯಿಂದ ಮನಸ್ಸಿಗೆ ನೆಮ್ಮದಿ ಸಾಧ್ಯ. ಕೆಲಸ ಮಾಡುವ ಮನಸ್ಸಿದ್ದರೆ ಸಮಯವಿಲ್ಲ ಎನ್ನಬಾರದು ಎಂದರು.

ಸನ್ಮಾನ: ಇದೇ ಸಂದರ್ಭ ರಂಗಭೂಮಿ ಕಲಾವಿದ ಕೃಷ್ಣಮೂರ್ತಿ ಕವತ್ತಾರು, ಕೊರೊನಾ ವಾರಿಯರ್ಸ್‍ಗಳಾದ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣ ಮತ್ತು ಡಾ. ಜ್ಯೋತಿಯವರನ್ನು ಲಯನ್ಸ್ ವತಿಯಿಂದ ಸನ್ಮಾನಿಸಲಾಯಿತು.

ಲಯನ್ಸ್ ನಿರ್ಗಮನ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಸ್ವಾಗತಿಸಿದರು. ಡಾ. ಮೆಲ್ವಿನ್ ಡಿಸೋಜಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು.

ಲಯನ್ಸ್ ಕಾರ್ಯದರ್ಶಿ ವಿನೋದ್ ಎಸ್. ಸಾಲ್ಯಾನ್, ಕೋಶಾಧಿಕಾರಿ ಪ್ರಬೋಧ್ ಕುಡ್ವ, ಲಿಯೋ ಕಾರ್ಯದರ್ಶಿ ಭೂಮಿಕಾ ಸಾಲ್ಯಾನ್, ಲಯನ್ಸ್ ನೂತನ ಕಾರ್ಯದರ್ಶಿ ಪೌಲ್ ರಾಲ್ಫಿ ಡಿಕೋಸ್ಟಾ, ಲಿಯೋ ನೂತನ ಕಾರ್ಯದರ್ಶಿ ಶೇನ್ ಡಿಕೋಸ್ಟಾ, ಕೋಶಾಧಿಕಾರಿಗಳಾದ ನವೀನ್ ಶೆಟ್ಟಿ ಮತ್ತು ಸಿಯಾ ಸುಶೀಲ್ ವೇದಿಕೆಯಲ್ಲಿದ್ದರು.
ವಿನೋದ್ ಎಸ್.ಸಾಲ್ಯಾನ್ ವರದಿ ಮಂಡಿಸಿದರು. ಕಿಶೋರ್ ಶೆಟ್ಟಿ ಧ್ವಜವಂದನೆಗೈದರು. ಉದಯ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.

ಫೋಟೊ:: ರಂಗಭೂಮಿ ಕಲವಿದ ಕೃಷ್ಣಮೂರ್ತಿ ಕವತ್ತಾರುರವರನ್ನು ಲಯನ್ಸ್ ಪದಗ್ರಹಣ ಸಂದರ್ಭ ಸನ್ಮಾನಿಸಲಾಯಿತು.