ಮಹಿಳೆಯರು ಲಭ್ಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು

Àುೂಲ್ಕಿ:: ಇಂದು ಮಹಿಳೆಯರಿಗೆ ವಿಪುಲ ಅವಕಾಶಗಳು ತೆರೆದಿಟ್ಟಿವೆ. ಅವಗಳನ್ನು ಸೂಕ್ತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಂಗಳೂರು ತಾಲೂಕು ಚುಟಿಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ, ಸಾಹಿತಿ ವಿಕಯಲಕ್ಷ್ಮೀ ಕಟೀಲು ಹೇಳಿದರು.

ಮೂಲ್ಕಿಯ ಶ್ರೀ ನಾರಾಯಣಗುರು ಸಭಾಂಗಣದಲ್ಲಿ ಯುವವಾಹಿನಿ ಮೂಲ್ಕಿ ಘಟಕದ ವತಿಯಿಂದ ಶನಿವಾರ ಸಂಜೆ ನಡೆದ 3ನೇ ವರ್ಷದ “ಭೂಮಿಕಾ- ಮಹಿಳಾ ಸಂಭ್ರಮ” ಸ್ಥಳೀಯ ಮಹಿಳಾ ಸಂಸ್ಥೆಗಳ ಸಾಂಸ್ಕøತಿಕ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.

ಸಂಸ್ಕøತಿಯ ತೊಟ್ಟಿಲು ಭಾರತ. ಆಲಂಗಿಸಿಕೊಳ್ಳುವ ವಿದೇಶಿಗರು ಇಂದು ಭಾರತೀಯರ ನಮಸ್ತೆಗೆ ಬದಲಾಗಿದ್ದಾರೆ. ಸಂಸ್ಕಾರ ಅತೀ ಮುಖ್ಯವಾದುದು ಎಂದ ಅವರು ನಮ್ಮ ಮಾತುಗಳು ಪ್ರಬುದ್ಧವಾಗಿರಬೇಕು. ನಮ್ಮ ಮಾತುಗಳನ್ನೇ ಮಕ್ಕಳು ಗಮನಿಸಿ ಕಲಿಯುತ್ತಾರೆ. ಹಣವೇ ಬದುಕಲ್ಲ. ಹಸಿವಾದಾಗ ಅನ್ನವನ್ನೇ ಹೊರತು ಹಣ ತಿನ್ನಲಾಗದು. ಅದರ ಬೆಲೆ ಮಕ್ಕಳಿಗೆ ತಿಳಿಯಪಡಿಸುವುದು ಮಹಿಳೆಯ ಜವಾಬ್ದಾರಿ ಎಂದರು.

ಸನ್ಮಾನ: ಇದೇ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ಕೃಷಿ ಕ್ಷೇತ್ರದ ಅಂಬಾ ಅಮೀನ್, ಸಾಮಾಜಿಕ ಕ್ಷೇತ್ರದ ಸುಮತಿ ಕವತ್ತಾರು ಮತ್ತು ಶೈಕ್ಷಣಿಕ ಕ್ಷೇತ್ರದ ಡಾ.ಸುಪ್ರಭಾ ಹರೀಶ್‍ರವರನ್ನು ಸನ್ಮಾನಿಸಲಾಯಿತು.

ಬಹುಮಾನ ವಿತರಣೆ: ಮಹಿಳಾ ಮಂಡಳಿಗಳಿಗಾಗಿ ನಡೆಸಿದ ಸಾಂಸ್ಕøತಿಕ ಸ್ಪರ್ಧಾ ವಿಜೇತರಿಗೆ ನಗದು ಸಹಿತ ಪ್ರಶಸ್ತಿ ವಿತರಿಸಲಾಯಿತು.

ಪಲಿತಾಂಶ: ಪ್ರಥಮ- ಕಿಲ್ಪಾಡಿ ಶ್ರೀ ಧೂಮಾವತಿ ಸೇವಾ ಮಹಿಳಾ ಮಂಡಳಿ, ದ್ವಿತೀಯ-ಚಿತ್ರಾಪು ಮಹಿಳಾ ಮಂಡಳಿ, ತೃತೀಯ-ಮಟ್ಟು ಶಾಂಭವಿ ಮಹಿಳಾ ಮಂಡಳಿ.

ಮೂಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷ ಸತೀಶ್ ಕಿಲ್ಪಾಡಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಮಂಗಳೂರು ಇನ್ಫೋಸಿಸ್‍ನ ಸೀನಿಯರ್ ಮ್ಯಾನೇಜರ್ ಶಶಿಕಲಾ ಜನಾರ್ಧನ್, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ರಕ್ಷಿತಾ ಯೋಗೀಶ್ ಕೋಟ್ಯಾನ್, ಕಾರ್ಯಕ್ರಮ ನಿರ್ದೇಶಕಿ ಭಾರತೀ ಭಾಸ್ಕರ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿದ್ದರು.

ರಾಜೇಶ್ವರೀ ನಿತ್ಯಾನಂದ ಮತ್ತು ರಾಜೀವಿ ವಿಶ್ವನಾಥ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಭರತೇಶ್ ಕೋಟ್ಯಾನ್ ವಂದಿಸಿದರು.

ಫೋಟೋ: ವಿವಿಧ ಕ್ಷೇತ್ರದ ಸಾಧಕರಾದ ಕೃಷಿ ಕ್ಷೇತ್ರದ ಅಂಬಾ ಅಮೀನ್, ಸಾಮಾಜಿಕ ಕ್ಷೇತ್ರದ ಸುಮತಿ ಕವತ್ತಾರು ಮತ್ತು ಶೈಕ್ಷಣಿಕ ಕ್ಷೇತ್ರದ ಡಾ.ಸುಪ್ರಭಾ ಹರೀಶ್‍ರವರನ್ನು ಸನ್ಮಾನಿಸಲಾಯಿತು.