ಪಡುಬಿದ್ರಿ ವ್ಯಾಪ್ತಿಯಲ್ಲಿ 9 ಪಾಸಿಟಿವ್

ಪಡುಬಿದ್ರಿ: ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಶನಿವಾರ ಒಂದೇ ದಿನ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ.

6 ಮಂದಿ ಮುಂಬೈಯಿಂದ ಬಂದು ಕ್ವಾರಂಟೈನ್‍ನಲ್ಲಿದ್ದವರು, ಇಬ್ಬರು ಬೆಂಗಳೂರಿನಿಂದ ಬಂದು ಕ್ವಾರಂಟೈನ್‍ನಲ್ಲಿದ್ದವರು ಹಾಗೂ ಒಬ್ಬರು ನಡ್ಸಾಲಿನ ಸೋಂಕಿತ ಸಹೋದರರ ಪ್ರಾಥಮಿಕ ಸಂಪರ್ಕ ಹೊಂದಿದವರು.

ಮುಂಬೈನಿಂದ ಬಂದು ಪಡುಬಿದ್ರಿ ಬೇಂಗ್ರೆಯ ಮನೆಯಲ್ಲಿ ಹೋಮ್ ಕ್ವಾರಂಟೈನ್‍ನಲ್ಲಿದ್ದ 46 ವರ್ಷದ ಪುರುಷ, 35, 47 ಮತ್ತು 18 ವರ್ಷಗಳ ಮಹಿಳೆಯರು, ಹಾಗೂ 11 ಮತ್ತು 6 ವರ್ಷದ ಮಕ್ಕಳ ಗಂಟಲು ಸ್ರಾವ ಪರೀಕ್ಷೆ ಪಾಸಿಟಿವ್ ಬಂದಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಬಂದು ಎರ್ಮಾಳು ಬಸದಿ ಬಳಿಯ ಮನೆಯಲ್ಲಿ ಹೋಮ್ ಕ್ವಾರಂಟೈನ್‍ನಲ್ಲಿದ್ದ 48 ವರ್ಷದ ಪುರುಷ ಮತ್ತು 42 ವರ್ಷದ ಅವರ ಪತ್ನಿಗೆ ಸೋಂಕು ದೃಢಪಟ್ಟಿದ್ದು ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರೊಂದಿಗೆ 10 ವರ್ಷದ ಮಗ ವಾಸವಿದ್ದು ಮನೆಯಲ್ಲಿ ಒಬ್ಬನನ್ನೇ ಬಿಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಆತನನ್ನೂ ತಾಯಿಯ ಜತೆಗೆ ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಹೆಜಮಾಡಿ ಕೋಡಿಯ 36 ವರ್ಷದ ವ್ಯಕ್ತಿ ನಡ್ಸಾಲಿನ ಸೋಂಕಿತ ಸಹೋದರರ ಸಂಪರ್ಕದಲ್ಲಿ ಕಾರಣ ಗಂಟಲು ಸ್ರಾವ ಪರೀಕ್ಷೆ ನಡೆಸಿದ ಸಂದರ್ಭ ಅವರಿಗೆ ಪಾಸಿಟಿವ್ ಬಂದಿದೆ. ಅವರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಅವರು ವಾಸವಿದ್ದ ಹೆಜಮಾಡಿ ಮಸೀದಿ ಬಳಿಯ ಮನೆಯನ್ನು ಸೀಲ್‍ಡೌನ್ ಮಾಡಲಾಗಿದೆ.

ಪಡುಬಿದ್ರಿ ಪ್ರಾ.ಆ.ಕೇ. ಎಲ್ಲರ ವರದಿ ನೆಗೆಟಿವ್: ಇದೇ ಸಂದರ್ಭ ಪಡುಬಿದ್ರಿ ಪ್ರಾಥಮಿಕ ಅರೊಗ್ಯ ಕೇಂದ್ರದ ವೈದ್ಯಾಧಿಕಾರಿ ಸಹಿತ ಎಲ್ಲಾ 21 ಮಂದಿಯ ಗಂಟಲು ಸ್ರಾವ ಪರೀಕ್ಷೆಯ ವರದಿ ನೆಗೆಟಿª