ನಿಧನ: ಹವ್ಯಾಸಿ ಯಕ್ಷಗಾನ ಕಲಾವಿದ ನಾಗರಾಜ ಭಟ್ (Nagaraja Bhat)

ಪಡುಬಿದ್ರಿ: ಹವ್ಯಾಸಿ ಯಕ್ಷಗಾನ ಕಲಾವಿದ, ಭಾಗವತಿಕೆ, ಚಂಡೆ, ಮದ್ದಲೆ ವಾದಕರಾಗಿಯೂ ಬಲು ಖ್ಯಾತಿಯನ್ನು ಪಡೆದಿದ್ದ ನಾಗರಾಜ ಭಟ್(60) ಪಡುಬಿದ್ರಿಯ ಸ್ವಗೃಹದಲ್ಲಿ ಭಾನುವಾರ ನಿಧನ ಹೊಂದಿದರು.

ಪಡುಬಿದ್ರಿಯ ಗಜಾನನ ಯಕ್ಷಗಾನ ಕಲಾ ಮಿತ್ರ ಮಂಡಳಿಯ ಸದಸ್ಯರಾಗಿ ತನ್ನ ಯಕ್ಷ ಬದುಕನ್ನು ಆರಂಭಿಸಿದ ನಾಗರಾಜ ಭಟ್ ಪ್ರಸಿದ್ಧ ಭಾಗವತರಾಗಿ, ಚಂಡೆ, ಮದ್ದಲೆ ವಾದಕರಾಗಿ ಹವ್ಯಾಸಿ ಕಲಾವಿದರಾಗಿ ಜಿಲ್ಲೆಯ ಎಲ್ಲೆಡೆ ಮಿಂಚಿದವರಾಗಿದ್ದರು. ಜಿಲ್ಲೆಯ ಕಾರ್ಕಳ, ಬೆಳವಾಯಿ, ಎಲ್ಲೂರು, ಪಡುಬಿದ್ರಿಯ ಗಜಾನನ ಯಕ್ಷಗಾನ ಕಲಾ ಮಿತ್ರ ಮಂಡಳಿಯಿಂದಲೂ ಸಮ್ಮಾನಿತರಾಗಿದ್ದರು. ಪಡುಬಿದ್ರಿಯ ಶನಿಕಥಾ ತಂಡದ ಪ್ರಮುಖ ಕಲಾವಿದರಾಗಿ, ಭಾಗವತರಾಗಿಯೂ ಇವರು ಕಲಾಸೇವೆಯನ್ನು ಗೈದಿದ್ದಾರೆ. ಬ್ರಾಹ್ಮಣ ಯುವಕ ವೃಂದದ ಸದಸ್ಯರಾಗಿ ಭಜನೆಯ ಕಲಾವಿದರಾಗಿಯೂ ಖ್ಯಾತಿಪಡೆದಿದ್ದರು. ಪಡುಬಿದ್ರಿಯ ವ್ಯವಸಾಯಿಕ ಸಹಕಾರಿ ಸಂಘದಲ್ಲಿ ಸುಮಾರು 25ವರ್ಷಗಳ ಕಾಲ ಗುಮಾಸ್ತರಾಗಿಯೂ ನಾಗರಾಜ ಭಟ್ ಸೇವೆ ಸಲ್ಲಿಸಿದ್ದರು.

ಅವರಿಗೆ ಪತ್ನಿ, 2 ಪುತ್ರ ಇದ್ದಾರೆ.