ನಿಧನ: ಶ್ರೀಪತಿ ಭಟ್ (64) ಮುಲ್ಕಿ (Sripathi Bhat, Mulki)

ಮುಲ್ಕಿ: ಇಲ್ಲಿಗೆ ಸಮೀಪದ ದೇಂದಡ್ಕ ನಿವಾಸಿ ಶ್ರೀಪತಿ ಭಟ್ (64) ಅನಾರೋಗ್ಯದಿಂದ ನಿಧನರಾದರು. ಅವರು .ಅವರು ಪತ್ನಿ ಹಾಗೂ ಜನವಿಕಾಸ ಸಮಿತಿ ಮುಲ್ಕಿಯ ಕಾರ್ಯದರ್ಶಿಯಾಗಿರುವ ಪ್ರಾಣೇಶ್ ಭಟ್ ಸಹಿತ 2 ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.ಪುರೋಹಿತರಾಗಿದ್ದ ಅವರು ಕಳೆದ ಕೆಲ ವರ್ಷಗಳಿಂದ ಮುಂಬಯಿಯಲ್ಲಿ ನೆಲೆಸಿದ್ದು ಬಳಿಕ ಊರಿನಲ್ಲಿ ಪುರೋಹಿತ ವೃತ್ತಿಯನ್ನು ಮಾಡುತ್ತಿದ್ದರು.ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರು ದಾನದರ್ಮಗಳಿಂದ ಪ್ರಸಿದ್ದರಾಗಿದ್ದರು.ಅವರ ನಿಧನಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ,ಶಾಸಕ ಉಮಾನಾಥ ಕೋಟ್ಯಾನ್,ಕಸಾಪ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು,ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ಪಧಾಧಿಕಾರಿಗಳಾದ ಜಿತೇಂದ್ರ ಭಟ್,ಜೀವನ್ ಶೆಟ್ಟಿ ಅಂಗಾರಗುಡ್ಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.