ಧರ್ಮ ಧರ್ಮಗಳ ನಡುವೆ ಭೀತಿ ಇರಬಾರದು,ಪ್ರೀತಿ ಇರಬೇಕು- ಕೇಮಾರು ಶ್ರೀ ಹೆಜಮಾಡಿಯಲ್ಲಿ ಎಸ್ಕೆಎಸ್ಸೆಸ್‍ಎಫ್ ಮಾನವ ಸರಪಳಿ ಕಾರ್ಯಕ್ರಮ

ಪಡುಬಿದ್ರಿ:  ಇಂದಿನ ವೇಗದ ಕಾಲಘಟ್ಟದಲ್ಲಿ ಯಾಂತ್ರಿಕತೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ.ಮಕ್ಕಳಿಗೆ ಸಂಸ್ಕಾರ ಸಂಸ್ಕøತಿಯನ್ನು ನೀಡುವ ಅಗತ್ಯವಿದೆ.ಧರ್ಮ ಧರ್ಮಗಳ ನಡುವೆ ಇರುವ ಭೀತಿಯನ್ನು ಹೋಗಲಾಡಿಸಿ ಪ್ರೀತಿ ಹುಟ್ಟಿಸುವ ಕಾರ್ಯ ತುರ್ತಾಗಿ ಆಗಬೇಕು ಎಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಘೋಷ ವಾಕ್ಯದೊಂದಿಗೆ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆ ವತಿಯಿಂದ ಹೆಜಮಾಡಿಯ ಕನ್ನಂಗಾರ್‍ನಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದ ಬಳಿಕ ಹೆಜಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಲಾದ ಮರ್‍ಹೋಮ್ ಶೈಖುನಾ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ಶ್ರೀಗಳು ಸಂದೇಶ ಭಾಷಣಗೈದರು.

ಧರ್ಮದ ಬಗ್ಗೆ ಸಂಪೂರ್ಣ ತಿಳಿಯದವರಿಂದ ಭೀತಿ ಹುಟ್ಟಿಸುವ ಕಾರ್ಯ ನಡೆಯುತ್ತಿದೆ.ಧಾರ್ಮಿಕತೆಯ ಕೊರತೆಯೇ ಇದಕ್ಕೆ ಕಾರಣ.ಎಳೆಯರಲ್ಲಿ ಧರ್ಮದ ಜತೆಗೆ ರಾಷ್ಟ್ರ ಭಕ್ತಿ,ಮಾತೃ ಭಕ್ತಿ ಹುಟ್ಟಿಸುವ ಕಾರ್ಯ ಆಗಬೇಕಿದೆ.ಹಾಗೂ ಸಹನೆಯ ಬಗ್ಗೆ ಹೆಚ್ಚು ತಿಳಿಹೇಳಬೇಕಾಗಿದೆ.ಇಂತಹ ಸಮ್ಮೇಳನಗಳು ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿ ಎಂದವರು ಶುಭ ಹಾರೈಸಿದರು.

ಸಮಾರಂಭ ಹಾಗೂ ಜಾಥಾವನ್ನು ಉದ್ಘಾಟಿಸಿದ ದಕ್ಷಿಣ ಕರ್ನಾಟಕ ಜಮೀಯತುಲ್ ಉಲೆಮಾ ಪ್ರಧಾನ ಕಾರ್ಯದರ್ಶಿ ಯು.ಕೆ.ಮುಹಮ್ಮದ್ ದಾರಿಮಿ ಮಾತನಾಡಿ,ವಿವಿಧತೆಯಲ್ಲಿ ಏಕತೆ ನಮ್ಮ ಮಂತ್ರವಾಗಿದೆ.ಭಾರತದಂತಹ ಸುಂದರ ದೇಶ ಜಗತ್ತಿನಲ್ಲಿ ಮತ್ತೊಂದಿಲ್ಲ.ಬೇರಯವರ ಒಳಿತನ್ನು ಬಯಸುವ ಏಕೈಕ ರಾಷ್ಟ್ರ ಭಾರತ.ದೇಶದ ಧಾರ್ಮಿಕ ಮುಖಂಡರು ಒಂದಾಗಿ ಕೈಜೋಡಿಸಿ ದೇಶವನ್ನು ಮೇಲೆತ್ತಬೇಕು.ಮಾನವೀಯತೆಯ ಮೇಲೆ ಬಿದ್ದ ಕರಿನೆರಳನ್ನು ಸರಿಪಡಿಸಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೈಜೋಡಿಸಬೇಕಾಗಿದೆ ಎಂದರು.

ಪ್ರಸ್ತಾವಿಕ ಮಾತನಾಡಿದ ಮೂಲ್ಕಿ ಜುಮ್ಮಾ ಮಸಿದಿಯ ಖತೀಬರಾದ ಎಸ್.ಬಿ.ಮುಹಮ್ಮದ್ ದಾರಿಮಿ,ಸಂವಿಧಾನ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.

ಶೈಖುನಾ ಅಝ್ಝರ್ ಫೈಝಿ ಬೊಳ್ಳೂರು ಧ್ವಜಾರೋಹಣಗೈದರು.ಅತ್ರಾಡಿ ಖಾಝಿ ಶೈಖುನಾ ಅಲಹಾಜ್ ವಿ.ಕೆ.ಅಬೂಬಕ್ಕರ್ ಮುಸ್ಲಿಯಾರ್ ದುಆ ನೆರವೇರಿಸಿದರು.

ಎರ್ಮಾಳು ಖತೀಬರಾದ ಶಬೀರ್ ಫೈಝಿ ಮಾನವ ಸರಪಳಿಯ ಪ್ರತಿಜ್ಞಾವಿಧಿ ಬೋಧಿಸಿದರು.ಸಂಶುಲ್ ಉಲೆಮಾ ಅರೆಬಿಕ್ ಕಾಲೇಜಿನ ವಿದ್ಯಾರ್ಥಿಗಳು ಸಾರೇ ಜಹಾಂಸೆ ಅಚ್ಛಾ.. ಆಲಾಪನೆಗೈದರು.

ಯಾಸರ್ ಅರಾಫತ್ ಕೌಸರಿ,ಇರ್ಷಾದ್ ದಾರಿಮಿ ಮಿತ್ತಬೈಲು,ಅಬ್ದುರ್ರಹ್ಮಾನ್ ಫೈಝಿ ಪಲಿಮಾರು,ಮುಹಮ್ಮದ್ ಆಲಿ ಫೈಝಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಮ್‍ಎ ಗಫೂರ್,ಮೂಲ್ಕಿ ಜಮಾತ್ ಅಧ್ಯಕ್ಷ ಇಕ್ಬಾಲ್ ಅಹ್ಮದ್,ಸೈಯದ್ ಮದನಿ ಅರೇಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ,ಜೆಡಿಎ ಕ್ಷೇತ್ರಾಧ್ಯಕ್ಷ ಸುಧಾಕರ ಶೆಟ್ಟಿ,ದಸಂಸ ಸಂಚಾಲಕ ಲೋಕೇಶ್ ಕಂಚಿನಡ್ಕ,ನೌಶಾದ್ ಹಾಜಿ ಸೂರಲ್ಪಾಡಿ,ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಕೆಪಿ ಇಬ್ರಾಹಿಮ್ ಮಟ್ಪಾಡಿ,ಯೂಸುಫ್ ಕೊಳ್ತಮಜಲು,ಯೂಸುಫ್ ನಿಟ್ಟೆ,ಸಾಹುಲ್ ಹಮೀದ್ ಐ.ಮೊೈದಿನಬ್ಬ,ಶೇಖಬ್ಬ ಕೋಟೆ,ಸುಧಾಕರ್ ಲಚ್ಚಿಲ್ ಮುಖ್ಯ ಅತಿಥಿಗಳಾಗಿದ್ದರು.

ಕನ್ನಂಗಾರು ಬೈಪಾಸ್‍ನಿಂದ ಕನ್ನಂಗಾರು ದರ್ಗಾಶರೀಫ್ ತನಕ ಮಾನವ ಸರಪಳಿ ಮೆರವಣಿಗೆ ನಡೆಯಿತು.

ಎಮ್.ಪಿ.ಮೊೈದಿನಬ್ಬ ಸ್ವಾಗತಿಸಿದರು.ಮೌಲಾನಾ ಹೈದರ್ ಆಲಿ ಮತ್ತು ಹನೀಫ್ ದಾರಿಮಿ ಇಡ್ಯ ಕಾರ್ಯಕ್ರಮ ನಿರ್ವಹಿಸಿದರು.ರಾಝಿ ಕನ್ನಂಗಾರು ವಂದಿಸಿದರು.