ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಒನರ್ಸ್ ಅಸೋಶಿಯೇಶನ್ ವತಿಯಿಂದ ಆಶ್ರಮದ ಮಕ್ಕಳಿಗೆ ಉಚಿತ ಊಟ

ಮೂಲ್ಕಿ: ಯಾವುದೇ ಒಂದು ಸಂಘಟನೆ ಸಮಾಜ ಸೇವೆ ಮೂಲಕ ಮುನ್ನಡೆದಾಗ ಆ ಸಂಘಟನೆ ಯಶಸ್ಸಾಗಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಒನರ್ಸ್ ಅಸೋಶಿಯೇಶನ್ ಇದರ ರಾಜೇಶ್ ಶೆಟ್ಟಿ ಹೇಳಿದರು.

ಅವರು ಮೂಲ್ಕಿ ಅಶ್ರಮದ ಮಕ್ಕಳಿಗೆ ಅಸೋಸಿಯೇಶನ್ ವತಿಯಿಂದ ಊಟ ನೀಡಿ ಮಾತನಾಡಿ, ಮಕ್ಕಳೆಂದರೆ ದೇವರಿಗೆ ಸಮಾನ. ಅವರ ಮನಸ್ಸು ಮುಗ್ದವಾಗಿರುತ್ತದೆ. ಮಾರ್ಚ್ 25 ರಂದು ಮಂಗಳೂರು ಪುರಭವನದಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಒನರ್ಸ್ ಅಸೋಶಿಯೇಶನ್ ಅಧಿಕೃತವಾಗಿ ಉದ್ಘಟನೆಗೊಳ್ಳಲಿದ್ದು, ಆ ಪ್ರಯುಕ್ತ ದ.ಕ. ಜಿಲ್ಲೆಯ ಎಲ್ಲಾ ಅಶ್ರಮದ ಮಕ್ಕಳಿಗೆ ಊಟ ನೀಡುವ ಯೋಜನೆಯನ್ನು ಕೈಗೊಂಡಿದ್ದೇವೆ. ಈಗಾಗಲೇ 18 ಅಶ್ರಮಗಳಿಗೆ ನಮ್ಮ ಸಂಸ್ಥೆಯಿಂದ ಊಟ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಸಮಾಜಮುಖಿ ಕೆಲಸಗಳನ್ನು ಮಾಡುವ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದರು.

ಅಸೋಸಿಯೆಶನ್‍ನ ಜೈಕೃಷ್ಣ ಕೋಟ್ಯಾನ್ ಮಾತನಾಡಿ, ಸ್ಥಳೀಯವಾಗಿ ಶಾಮಿಯಾನ ಒಕ್ಕೂಟದ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗಿದ್ದು ಇದೀಗ ಜಿಲ್ಲಾ ಕ್ಯಾಟರಿಂಗ್ ಒನಸ್ರ್ಸ್ ಅಸೋಶಿಯೇಶನ್ ಮೂಲಕವೂ ಅದನ್ನು ಮುಂದುವರಿಸಿಕೊಂಡು ಹೋಗಲಾಗುದು ಎಂದರು.

ಈ ಸಂದರ್ಭ ಅಶ್ರಮದ ಸುಮಾರು ನೂರು ಮಕ್ಕಳಿಗೆ ಮಾಂಸಹಾರಿ ಮತ್ತು ಸಸ್ಯಹಾರಿ ಊಟವನ್ನು ನೀಡಲಾಯಿತು.

ಕೃಷ್ಣ ಕೋಟ್ಯಾನ್, ಪೂಜಾ ಪ್ರೆಂಡ್ಸ್‍ನ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಮಿಥುನ್ ಸುವರ್ಣ, ನಯನ ಮತ್ತಿತರರು ಉಪಸ್ಥಿತರಿದ್ದರು.

ಚಂದ್ರಹಾಸ್ ಶೆಟ್ಟಿಗಾರ್ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.