ಜಿಲ್ಲಾ ಆಯುಷ್ ತಂಡದಿಂದ ಬಾಬಾ ರಾಮ್‍ದೇವ್ ಭೇಟಿ

ಪಡುಬಿದ್ರಿ: ಉಡುಪಿ ಜಿಲ್ಲಾ ಆಯುಷ್ ವೈದ್ಯ ಸಂಘದ ಅಧ್ಯಕ್ಷ ಡಾ.ಎನ್.ಟಿ.ಅಂಚನ್‍ರವರು ಪತಂಜಲಿ ಯೋಗ ಗುರು ಬಾಬಾ ರಾಮ್‍ದೇವ್‍ರವರನ್ನು ಭೇಟಿ ಮಾಡಿ ಯೋಗ-ಆಯುರ್ವೇದದ ಬಗ್ಗೆ ಸಮಾಲೋಚನೆ ಹಾಗೂ ವಿಚಾರ ವಿನಿಮಯ ನಡೆಸಿದರು.

ಜಿಲ್ಲಾ ಆಯುಷ್ ವೈದ್ಯರ ಪರವಾಗಿ ರಾಮ್‍ದೇವ್‍ರವರಿಗೆ ಹೂಗುಚ್ಛ ನೀಡಿ ಸತ್ಕರಿಸಿದರು.
ಈ ಸಂದರ್ಭ ಆಯುಷ್ ಜಿಲ್ಲಾ ಕಾರ್ಯದರ್ಶಿ ಡಾ.ಸತೀಶ್ ರಾವ್, ವಿಶುಕುಮಾರ್ ಶೆಟ್ಟಿಬಾಲ್ ಗುತ್ತಿನಾರ್, ಜಯ ಶೆಟ್ಟಿ ಪದ್ರ, ಪಡುಬಿದ್ರಿ ಹಠ ಯೋಗ ಗುರು ಮಕರಂದ ಸಾಲ್ಯಾನ್, ಸುಧಾಕರ ಶೆಟ್ಟಿ ಹೆಜಮಾಡಿ, ಶ್ರೀನಿವಾಸ ಶರ್ಮ, ಜಗದೀಶ್ ಕೆ. ಉಪಸ್ಥಿತರಿದ್ದರು.

ಇದೀಗ ಆಯುರ್ವೇದವು ಜಾಗತಿಕ ಮಟ್ಟದಲ್ಲಿ ಸ್ವದೇಶಿ ಪರಂಪರೆಯು ಆಯುರ್ವೇದಿ ಪದ್ಧತಿ ಜನಪ್ರಿಯಗೊಳ್ಳುತ್ತಿದ್ದು, ಯೋಗ ಮತ್ತು ಆಯುರ್ವೇದ ಪಾತ್ರ ಪ್ರಶಂಶನೀಯ. ಇದರಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ನಡೆಸಿದಾಗ ಇದರ ಸಂಪೂರ್ಣ ಲಾಭವನ್ನು ಜನತೆ ಪಡೆಯಬಹುದಾಗಿದೆ ಎಂದು ಡಾ.ಎನ್.ಟಿ.ಅಂಚನ್ ಹೇಳಿದರು.

ಯೋಗ ಹಾಗೂ ಆಯುರ್ವೇದ ಚಿಕಿತ್ಸೆಯ ಮೂಲಕ ಪರಿಣಾಮಕಾರಿಯಾಗಿ ಡಯಾಬಿಟೀಸ್, ಚರ್ಮರೋಗ, ಸಂಧಿನೋವು, ವಾತರೋಗ, ಥೈರಾಯ್ಡ್, ಸ್ಪಾಂಡಿಲೈಸಿಸ್ ಮುಂತಾದ ಕಾಯಿಲೆಗಳ ಬಗ್ಗೆ ಉತ್ತಮ ಔಷಧೀಯ ಅನುಭವ ಮಾಹಿತಿಗಳನ್ನು ಬಾಬಾ ರಾಮ್‍ದೇವ್ ಜತೆ ಹಂಚಿಕೊಂಡರು