ಕರಾವಳಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಜಲ ಮಂಡಳಿ ರಚನೆ ಶೀಘ್ರ-ಕೋಟ ಶ್ರೀನಿವಾಸ ಪೂಜಾರಿ

ಮೂಲ್ಕಿ: ಕರ್ನಾಟಕ ಕರಾವಳಿಯಲ್ಲಿ ಬೀಚ್ ಅಭಿವೃದ್ಧಿ, ಬಂದರು-ಮೀನುಗಾರಿಕಾ ಜೆಟ್ಟಿ ಅಭಿವೃದ್ಧಿ ಹಾಗೂ ಸಮುದ್ರ ತಡೆಗೋಡೆ ಇತ್ಯಾದಿ ಕಾಮಗಾರಿಗಳ ಬಗ್ಗೆ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ತಜ್ಞರ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ಜಲ ಮಂಡಳಿ(ಮೆರಿಟೈಮ್ ಬೋರ್ಡ್) ರಚನೆಗೆ ರಾಜ್ಯ ಸರಕಾರ ನಿರ್ಧರಿಸಿದ್ದು, ಶೀಘ್ರ ಮಂಡಳಿ ರಚನೆಯಾಗಲಿದೆ. ಈ ಮೂಲಕ ಕರಾವಳಿಯ 320 ಕಿಮೀ ವ್ಯಾಪ್ತಿಯ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದು ಮುಜರಾಯಿ, ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರ ಮೂಲ್ಕಿಯ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಸಸಿಹಿತ್ಲು ಸಮುದ್ರ ಕೊರೆತ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಪರಿಶೀಲನೆ ನಡೆಸಿ ಆದ್ಯತೆ ಮೇರೆಗೆ ತಡೆಗೋಡೆ ನಿರ್ಮಿಸಲಾಗುವುದು ಎಂದರು.

ಸಿದ್ದರಾಮಯ್ಯನವರು ನೆರೆಪೀಡಿತರಿಗೆ ಪರಿಹಾರ ತರುವಲ್ಲಿ ಬಿಜೆಪಿ ಸರಕಾರದ ವೈಫಲ್ಯದ ಬಗ್ಗೆ ಹೇಳಲಾದ ದೂರಿನ ಬಗ್ಗೆ ಪ್ರಶ್ನಿಸಿದಾಗ, ಟೀಕೆ ಟಿಪ್ಪಣಿ ಸಹಜ. ನೆರೆ ಪೀಡಿತರಿಗೆ ಅವರ ಅವಧಿಯಲ್ಲಿ ತಂದ ಅನುದಾನಕ್ಕಿಂತ ಹೆಚ್ಚು ಅನುದಾನ ತರಲು ಬದ್ಧರಿದ್ದೇವೆ. ನೆರೆ ಪೀಡಿತರಿಗೆ ಮನೆ ನಿರ್ಮಾಣಕ್ಕೆ ಸಿದ್ಧರಾಮಯ್ಯ ಸರಕಾರ ನೀಡಿದ್ದಕ್ಕಿಂತ ಅತೀ ಹೆಚ್ಚು ಪರಿಹಾರ ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಯವರು ವಿವಿಧ ಇಲಾಖೆಗಳ ಮೂಲಕ ನೆರೆ ಸಂತ್ರಸ್ತರಿಗೆ ಸಹಕರಿಸಲು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.

ಬಪ್ಪನಾಡು ದೇವಳಕ್ಕೆ ಶೀಘ್ರ ಚಿನ್ನ : ದೇವಳದ ಸ್ವರ್ಣ ಪಲ್ಲಕ್ಕಿಗೆ ಬೇಕಾದ ಸರಕಾರದ ಪರವಾನಗಿ ಮತ್ತು ಅನುಪಯುಕ್ತ ಚಿನ್ನದ ಬಳಕೆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈವರೆಗೂ ಅನುಮತಿ ದೊರೆಯದ ಬಗ್ಗೆ ದೇವಳದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಕಾರ್ಯದರ್ಶಿ ಸುನಿಲ್ ಆಳ್ವ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ.ಯವರು ಸಚಿವರ ಗಮನ ಸೆಳೆದು ಶೀಘ್ರ ಅನುಮತಿ ದೊರಕಿಸುವಂತೆ ವಿನಂತಿಸಿದರು.

ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಎರಡು ದಿನದೊಳಗೆ ಈ ಬಗ್ಗೆ ಅನುಮತಿ ದೊರೆಯಲಿದೆ ಎಂದು ಖಚಿತ ಭರವಸೆ ನೀಡಿದರು.

ದೇವಳದಲ್ಲಿ ಅನ್ನಛತ್ರ ನಿರ್ಮಾಣಕ್ಕೆ ಮುಂದಡಿಯಿಟ್ಟಿದ್ದು, ಸರಕಾರದ ಅನುದಾನಕ್ಕಾಗಿ ಬೇಡಿಕೆ ಮಂಡಿಸಲಾಯಿತು. ದಾನಿಗಳ ನೆರವಿನಿಂದ ನಿರ್ಮಿಸಬೇಕೆಂದು ವಿನಂತಿಸಿದ ಅವರು ಆದಾಯ ರಹಿತ ದೇವಳಗಳ ಅಭಿವೃದ್ಧಿಗೆ ಸರಕಾರ ಹೆಚ್ಚು ಮುತುವರ್ಜಿ ವಹಿಸಲಿದ್ದು, ಆದಾಯ ಹೆಚ್ಚಿರುವ ದೇವಳಗಳು ಸ್ವಯಂ ಅಭಿವೃದ್ಧಿಗೆ ಮನಮಾಡಬೇಕೆಂದು ವಿನಂತಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ರಚನೆ ವಿಳಂಬ ಬಗ್ಗೆ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಸಚಿವರ ಗಮನ ಸೆಳೆದರು. ಈ ಬಗ್ಗೆ ಈಗಿರುವ ಗೊಂದಲಗಳ ಬಗ್ಗೆ ಸಚಿವರು ಮಾಹಿತಿ ನೀಡಿ ಸೂಕ್ತ ಸಮಯದಲ್ಲಿ ಸಮಿತಿ ರಚನೆಯಾಗಲಿದೆ ಎಂದರು.

ಅರ್ಚಕ ವೇದಮೂರ್ತಿ ಶ್ರೀಪತಿ ಉಪಾಧ್ಯಾಯ ಪೂಜೆ ಸಲ್ಲಿಸಿ ಸಚಿವರಿಗೆ ಪ್ರಸಾದ ವಿತರಿಸಿದರು. ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ, ಹರಿಕೃಷ್ಣ ಪುನರೂರು, ನಪಂ ಸದಸ್ಯರಾದ ಸತೀಶ್ ಅಂಚನ್, ಶೈಲೇಶ್ ಕುಮಾರ್, ರಾಧಿಕಾ ಯಾದವ ಕೋಟ್ಯಾನ್, ದಯಾವತಿ ಅಂಚನ್, ಬಿಜೆಪಿ ಮುಖಂಡರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಶರತ್ ಕುಬೆವೂರು, ಸತ್ಯೇಂದ್ರ ಶೆಣೈ, ಉದಯ ಶೆಟ್ಟಿ ಆದಿಧನ್, ಕಮಲಾಕ್ಷ ಬಡಗುಹಿತ್ಲು, ಸುಜಿತ್ ಸಾಲ್ಯಾನ್, ನವೀನ್‍ರಾಜ್, ಜಯಾನಂದ, ಅರ್ಜುನ್ ಹಿರೇಮಠ, ವಿಠಲ ಎನ್.ಎಮ್.,ಸಂತೋಷ್ ಶೆಟ್ಟಿ, ದೇವಪ್ರಸಾದ್ ಪುನರೂರು, ರವೀಂದ್ರ ಶೆಟ್ಟಿ, ಗಿರೀಶ್ ಮೆಂಡನ್, ತಾರಾನಾಥ ಅಂಗರಗುಡ್ಡೆ, ದೇವಾನಂದ ಬಪ್ಪನಾಡು, ಅರುಣ್ ಭಮಡಾರಿ, ದೇವಪ್ರಸಾದ್ ಕೆಂಪುಗುಡ್ಡೆ, ಕಿಶೋರ್ ಶೆಟ್ಟಿ,ಪ್ರಕಾಶ್ ದೇವಾಡಿಗ, ಮಧುಸೂದನ್, ಉಮೇಶ್ ಭಂಡಾರಿ, ಕೃಷ್ಣರಾಜ್, ಸಂಜೀವ ದೇವಾಡಿಗ ಉಪಸ್ಥಿತರಿದ್ದರು.