ಉಚ್ಚಿಲ ಪೆÇಲ್ಯ: ನೆಗೆಟಿವ್ ವರದಿ

ಪಡುಬಿದ್ರಿ: ಶುಕ್ರವಾರ ಪಾಸಿಟವ್ ವರದಿ ಬಂದ 28 ಗಂಟೆಗಳ ಬಳಿಕ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಉಚ್ಚಿಲ ಪೆÇಲ್ಯದ ಯುವಕರೋರ್ವರಿಗೆ ಇಂದಿನ ಗಂಟಲು ದ್ರವ ಪರೀಕ್ಷಾ ವರದಿಯು ನೆಗೆಟಿವ್ ಬಂದ ಕಾರಣ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಮಾಡಲಾಗಿದೆ.

ಅವರನ್ನು ಉಚ್ಚಿಲದ ಫ್ಲಾಟ್‍ನಲ್ಲಿಯೇ ಮುಂದಿನ 28ದಿನಗಳ ಅವಧಿಗೆ ಹೋಂ ಕ್ವಾರೆಂಟೈನ್‍ನಲ್ಲಿರುವಂತೆ ಸೂಚಿಸಲಾಗಿದೆ. ಆ ಅವಧಿಯವರೆಗೂ ಈ ಆವರಣದ ಸೀಲ್‍ಡೌನ್ ಮುಂದುವರಿಯಲಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.